ಗಂದಿಗೆಗಾರನ ತೂಕ

ಚಿನ್ನ, ಬೆಳ್ಳಿ, ವಜ್ರ, ಹರಳು, ಮದ್ದುಗಳ ಹೊರತಾಗಿ ಸಾಮಾನಮುಗಳನ್ನು ತೂಗಲು ಮುಖ್ಯವಾಗಿ ಇಂಗ್ಲೆಂಡು ಅಮೆರಿಕಗಲಲಿ ಬಳಸುತ್ತಿದ್ದ ತೂಕ ಪದ್ಧತಿ (ಆವರ್ಡಪೋಯಿಸ್ ವೆಯ್ಟ್). ಇದರ ಮೂಲಮಾನ ತೂಕ ಒಂದು ಗ್ರೆಯ್ನು. ಒಂದು ಘನ ಅಂಗುಲದಷ್ಟು ನೀರು 252.458 ಗ್ರೆಯ್ನುಗಳು ತೂಗುತ್ತದೆ. ಇಂಥ 7000 ಗ್ರೆಯ್ನುಗಳು ಸೇರಿದರೆ ಗಂದಿಗೆಗಾರನ ಒಂದು ಪೌಂಡು ಆಗುತ್ತದೆ.  ಕೊಂದು ಪೌಂಡಿನಲ್ಲಿ 16 ಔನ್ಸುಗಳು ಒಂದು ಔನ್ಸಿನಲ್ಲಿ 16 ಡ್ರಾಮುಗಳೂ ಇರುವುವು. 14 ಪೌಂಡಿಗಳಿಗೆ ಒಂದು ಸ್ಟೋನು, 2 ಸ್ಟೋನುಗಳಿಗೆ ಒಂದು ಕ್ವಾರ್ಟರು, 4 ಕ್ವಾರ್ಟರುಗಳಿಗೆ ಒಂದು ಹಂಡ್ರಡ್‍ವೇಟ್, 20 ಹಂಡ್ರೆಡ್‍ವೇಟುಗಳಿಗೆ ಒಂದು ಟನ್ನೂ ಆಗುತ್ತದೆ. 												(ಡಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ